ಹಳ್ಳಕ್ಕೆ ಬಿದ್ದು ನಾಲ್ಕು ವರ್ಷದ ಮಗು ಸಾವು,,! ಮೂರು ದಿನ ಕಳೆದರು ಸಿಗದ ಮೃತ ದೇಹ,,* 

ಹಳ್ಳಕ್ಕೆ ಬಿದ್ದು ನಾಲ್ಕು ವರ್ಷದ ಮಗು ಸಾವು,,! ಮೂರು ದಿನ ಕಳೆದರು ಸಿಗದ ಮೃತ ದೇಹ,,

ಜಿಲ್ಲಾದ್ಯಂತ ಸುದ್ದಿಯಾದರು,,! ಜನ ಪ್ರತಿನಿಧಿಗಳ ತಾತ್ಸಾರ,,

ಗಂಗಾವತಿ : ನಗರದ 6ನೇ ವಾರ್ಡ್ ಮೆಹಬೂಬ್ ನಗರದ ಮುಸ್ಲಿಂ ಬಡ ಕುಟುಂಬದ ಸಲೀಂ, ಸಲ್ಮಾ ದಂಪತಿಯ ಆರು ವರ್ಷದ ಆಜಾನ್ ಎನ್ನುವ ಬಾಲಕ ಆಟವಾಡುತ್ತಾ, ವಾರ್ಡನಲ್ಲಿ ಹರಿಯುವ ದುರ್ಗಮ್ಮನ ಹಳ್ಳದ ಬಳಿ ತೆರಳಿದಾಗ ಆಯ ತಪ್ಪಿ ಹರಿಯುವ ಹಳ್ಳಕ್ಕೆ ಬಿದ್ದಿದ್ದು ನೀರಿನಲ್ಲಿ ಮುಳುಗಿ ಕಾಣೆಯಾಗಿದ್ದಾನೆ. ತಂದೆ, ತಾಯಿ ತಮ್ಮ ದಿನ ನಿತ್ಯದ ಕೂಲಿ ಕೆಲಸಕ್ಕೆಂದು ತೆರಳಿದಾಗ ಈ ಘಟನೆ ಸಂಭವಿಸಿದೆ. ಬಡ ಕುಟುಂಬದ ಹಿನ್ನೆಲೆ ಹೊಂದಿದ ಸಲೀಂ ತನ್ನ ಮಗ ಆಜಾನ್ ನ್ನು ಅವರ ತಾತನ ಬಳಿ ಬಿಟ್ಟು ಪತಿ, ಪತ್ನಿ ಕೆಲಸಕ್ಕೆ ತೆರಳುತ್ತಿದ್ದರು. ಎಂದಿನಂತೆ ಮಗನನ್ನು ಮನೆಯಲ್ಲಿ ಬಿಟ್ಟು ಹೋದಾಗ ಮಗು ಆಟವಾಡುತ್ತಾ ಹಳ್ಳದ ಬಳಿ ಹೋಗಿದ್ದನ್ನು ಯಾರು ಗಮನಿಸದೇ ಇದ್ದರಿಂದ ಈ ಅನಾಹುತ ಸಂಭವಿಸಸ್ವಲ್ಪ ಸಮಯದ ನಂತರ ಮಗು ಕಾಣದೇ ಇದ್ದರಿಂದ ಅವರ ಮನೆಯವರು ಹುಡುಕಾಟ ನಡೆಸಿದ್ದಾರೆ. ಮಗು ಕಾಣದೇ ಇರುವುದರಿಂದ ವಿಚಲಿತರಾದ ಮನೆಯವರು ಎಲ್ಲಾ ಸ್ನೇಹಿತರಿಗೆ, ವಿಷಯ ತಿಳಿಸಿದ್ದು ಹುಡುಕಾಟ ನಡೆಸಿ ಹತ್ತಿರವಿದ್ದ ಗಾಡ್ರೆಜ್ ಅಂಗಡಿಯವರಿಗೆ ವಿಷಯ ತಿಳಿದು ಅಂಗಡಿಯಲ್ಲಿನ ಸಿಸಿ ಕ್ಯಾಮರಾದಲ್ಲಿ ತೆಗೆದು ನೋಡಿದಾಗ ಹಳ್ಳದ ಹತ್ತಿರ ಆಟವಾಡುತ್ತಾ ಹಳ್ಳದಲ್ಲಿ ಬಿದ್ದಿರುವ ಸುದ್ದಿ ಸಾಯಂಕಾಲ 5ಗಂಟೆಗೆ ತಿಳಿದಿದ್ದು ಬಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು.

ಈ ವಿಷಯ ತಿಳಿಯುತ್ತಿದ್ದಂತೆ ವಾರ್ಡಿನ ಜನರು, ಯುವಕರು ಸೇರಿ ಮಗುವಿನ ಹುಡುಕಾಟ ನಡೆಸಿದ್ದು, ಮೂರು ದಿನಗಳು ಕಳೆದರೂ ಮಗು ದೊರೆತಿಲ್ಲಾ ಎಂದು ತಿಳಿದು ಬಂದಿದೆ.

ಘಟನೆ ನಡೆದ ವಿಷಯ ತಿಳಿಯುತ್ತಿದ್ದಂತೆ ವಾರ್ಡನ ಮೈನುದ್ದಿನ್ ಹಾಗೂ 8ನೇ ವಾರ್ಡನ ಖಾಸಿಂಸಾಬ 7ನೇ ವಾರ್ಡ ಮನೋಹರಸ್ವಾಮಿ ಸೇರಿದಂತೆ, ಪೌರಾಯುಕ್ತ ವಿರುಪಾಕ್ಷ ಮೂರ್ತಿ ಸತತ ಪ್ರಯತ್ನದಲ್ಲಿದ್ದಾರೆ ಎಂದು ತಿಳಿದು ಬಂದಿದೆ.

ವಾರ್ಡನ ಮುಖಂಡ ಮೈನುದ್ದಿನ್ ಹಾಗೂ ಯುವಕರು ಮೂರು ದಿನಗಳಿಂದಲೂ ಶೋಧ ಕಾರ್ಯವನ್ನು ನಡೆಸುತ್ತಿದ್ದಾರೆ. ಈ ವಿಷಯವನ್ನು ಕುರಿತು ಶಾಸಕರಿಗೆ ತಿಳಿಸಲು ಎಷ್ಟು ಪ್ರಯತ್ನಿಸಿದರು ಪ್ರಯೋಜನವಾಗಿಲ್ಲಾ, ಹಾಗೂ ಸಚಿವರಾದರೂ ಇಲ್ಲಿಯವರೆಗೆ ಸ್ಥಳಕ್ಕೆ ಭೇಟಿ ನಿಡಿಲ್ಲಾ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಜೆಡಿಎಸ್ ಕಾರ್ಯಾಧ್ಯಕ್ಷ ರಾಜು ನಾಯಕ ಭೇಟಿ ನೀಡಿ ಮಾತನಾಡಿ ಜನವಸತಿ ಪ್ರದೇಶವಾದ ಈ ವಾರ್ಡನಲ್ಲಿ ದೊಡ್ಡ ಹಳ್ಳ ಹರಿಯುತಿದ್ದು, ನಗರ ಸಭೆಯವರು ದೊಡ್ಡ ಹಳ್ಳಕ್ಕೆ ತಡೆಗೋಡೆ ನಿರ್ಮಿಸದೇ ಇರುವುದರಿಂದ ಇಂತಹ ದುರ್ಘಟನೆ ಸಂಭವಿಸಿದೆ. ಮುಂದೆ ಇಂತಹ ಅವಘಡ ಸಂಭವಿಸದಂತೆ ತಡೆಗೋಡೆ ನಿರ್ಮಿಸಬೇಕು ಎಂದು ಅವರು ಆಗ್ರಹಿಸಿದರು.

ಈ ವಿಷಯ ಜಿಲ್ಲೆಯಾಧ್ಯಂತ ಸುದ್ದಿಯಾದರು ಸಹಿತ ಸ್ಥಳೀಯ ಶಾಸಕರಾಗಲಿ, ಜಿಲ್ಲಾ ಉಸ್ತುವಾರಿಗಳಾಗಲಿ ಭೇಟಿ ನೀಡದಿರುವುದು ಇಲ್ಲಿನ ಜನರ ದುರಂತವಾಗಿದೆ. ಕೂಡಲೇ ಜನ ಪ್ರತಿನಿಧಿಗಳು ಮಗುವಿನ ನಿವಾಸಕ್ಕೆ ಆಗಮಿಸಿ ಸಾಂತ್ವಾನ ಹೇಳುವ ಮೂಲಕ ಬಡ ಕುಟುಂಬಕ್ಕೆ 20 ಲಕ್ಷ ಪರಿಹಾರ ನೀಡುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಇರ್ಫಾನ್, ಜಾಫರ್, ಸಲೀಂ ಸೇರಿದಂತೆ ಇನ್ನೀತರರು ಇದ್ದರು.


Posted

in

by

Tags:

Comments

Leave a Reply

Your email address will not be published. Required fields are marked *