ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಘದಿಂದ ತಾಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿ,, 

 

ಕೊಪ್ಪಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಘದಿಂದ ತಾಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿಯಲ್ಲಿ ಮಹಿಳಾ ಹಕ್ಕು ಮತ್ತು ಕಾನೂನು ಕುರಿತು ವಿಚಾರ ಗೋಷ್ಠಿಯ ಮೂಲಕ ವರದಕ್ಷಿಣೆ ಕಿರುಕುಳ, ಫೋಕ್ಸೋ ಕಾಯಿದೆ, ಆಸ್ತಿ ವಿಂಗಡಣೆ, ಬಾಲ್ಯ ವಿವಾಹ, ಮಹಿಳೆಯರ ಹಕ್ಕು, ಮಹಿಳಾ ದೌರ್ಜನ್ಯ ಹಾಗೂ ಕಾನೂನು ಕುರಿತು ಸದಸ್ಯರಿಗೆ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಗೌರಮ್ಮ ಲೋಹಿತ ದೇಸಾಯಿರವರು ಮಾಹಿತಿ ನೀಡಿದರು.

 

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ

ಯೋಜನೆ ವತಿಯಿಂದ ರವಿವಾರದಂದು

ಹಮ್ಮಿಕೊಂಡ ಕೊಪ್ಪಳ ಪಶ್ಚಿಮ ಯೋಜನಾ ಕಚೇರಿ ವ್ಯಾಪ್ತಿಯ ತಾಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

 

ನಂತರ ಕಲ್ಯಾಣ ಕರ್ನಾಟಕ ಕೊಪ್ಪಳ ಪ್ರಾದೇಶಿಕ ವಿಭಾಗದ ನಿರ್ದೇಶಕ ಚಂದ್ರಶೇಖರ್ ಜೆ. ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಜ್ಞಾನವಿಕಾಸದ ಪ್ರಮುಖ ಕಾರ್ಯಕ್ರಮಗಳು ಹಾಗೂ ಅವುಗಳಿಂದ ಮಹಿಳೆಯರು ಮಾನಸಿಕವಾಗಿ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸದೃಢರಾಗಿರುವ ಬಗ್ಗೆ ಮನಮುಟ್ಟುವಂತೆ

ಮಾಹಿತಿ ಮಾರ್ಗದರ್ಶನ ನೀಡಿದರು.

 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮತಿ ಡಾ. ರಾಧಾ ಕೆ ಕುಲಕರ್ಣಿ ರವರು ವಹಿಸಿದ್ದರು.

 

ಮುಖ್ಯ ಅತಿಥಿಗಳಾಗಿ ಜಿಲ್ಲಾ ನಿರ್ದೇಶಕರಾದ ಪ್ರಕಾಶ್ ರಾವ್, ಸಂಚಾರಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಉಮೇರಾಬಾನು, ಶ್ರೀ ಜಗದ್ಗುರು ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಕೊಪ್ಪಳ ಇದರ ಮುಖ್ಯಸ್ಥರಾದ ಶ್ರೀಜ ಉಪಸ್ಥಿತರಿದ್ದರು.

 

ಈ ವೇಳೆ ಜ್ಞಾನ ವಿಕಾಸ ಸದಸ್ಯರಿಗೆ ಆಟೋಟ ಸ್ಪರ್ಧೆ, ರಂಗೋಲಿ ಸ್ವರ್ಧೆ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಜ್ಞಾನ ವಿಕಾಸ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಜಗದೀಶ್ ಕೆ ಎಚ್ ಸ್ವಾಗತಿಸಿದರು, ಜ್ಞಾನ ವಿಕಾಸ ಸಮನ್ವಯಧಿಕಾರಿ ಗೀತಾ ನಿರೂಪಿಸಿದರು, ಮೇಲ್ವಿಚಾರಕಿ ಲಕ್ಷ್ಮೀ ವಂದಿಸಿದರು.

 

ಕಾರ್ಯಕ್ರಮದಲ್ಲಿ 25 ಕೇಂದ್ರದ ಸಂಯೋಜಕಿಯರು, ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಭಾಗವಹಿಸಿದ್ದರು.


Posted

in

by

Tags:

Comments

Leave a Reply

Your email address will not be published. Required fields are marked *