ದೇಶಕ್ಕೆ ರಾಷ್ಟ್ರೀಯ ಸೇವಾ ಯೋಜನೆ ಕೊಡುಗೆ ಅಪಾರವಾದದ್ದು .ಎಸ್ ಬಿ ಕುರಿ.
ದೇಶಕ್ಕೆ ರಾಷ್ಟ್ರೀಯ ಸೇವಾ ಯೋಜನೆ ಕೊಡುಗೆ ಅಪಾರವಾದದ್ದು .ಎಸ್ ಬಿ ಕುರಿ.
ಕೊಪ್ಪಳ : ದೇಶಕ್ಕೆ ರಾಷ್ಟ್ರೀಯ ಸ್ವಯಂಸೇವಕರ ಕೊಡುಗೆ ಅಪಾರವಾದದ್ದು. ಯುವಜನತೆಯಾದ ನೀವು ರಾಷ್ಟ್ರೀಯ ಸೇವಾ ಯೋಜನೆಯ ಮೂಲಕ ನಿಸ್ವಾರ್ಥ ಸೇವೆಯನ್ನು ಸಲ್ಲಿಸಬೇಕು ಎಂದು ಸೇವಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಎಸ್ ಬಿ ಕುರಿ ಅವರು ಹೇಳಿದರು. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಕಾನೂನು ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆಯ ಅಂಗವಾಗಿ ಉದ್ಘಾಟಕರಾಗಿ ಆಗಮಿಸಿ ಅವರು ಮಾತನಾಡಿದರು. ರಾಷ್ಟ್ರೀಯ ಸೇವಾ ಯೋಜನೆ ಮಹಾತ್ಮ ಗಾಂಧೀಜಿಯವರ ಜನ್ಮಶತಾಬ್ದಿ ಸವಿನೆನಪಿಗಾಗಿ ಆಚರಿಸಲಾಗುತ್ತಿದೆ.
ಇದು ಮಹಾತ್ಮ ಗಾಂಧೀಜಿಯವರ ಕನಸಿನ ಕೂಸು ಹಾಗೂ ಡಾ. ಬಿ ಆರ್ ಅಂಬೇಡ್ಕರ್ ಅವರ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದ್ದು ಸ್ವಯಂಸೇವಕರು ದೇಶಕ್ಕೆ ಏನನ್ನಾದರೂ ಸೇವೆಯನ್ನು ಸಲ್ಲಿಸಬೇಕಾಗಿದ್ದರೆ ಅದು ಇಂತಹ ಮಹಾನ್ ಯೋಜನೆಗಳ ಮೂಲಕ ಸ್ವಯಂ ಸೇವಾಕರಾಗಿ ಸೇರಿ ಒಂದು ನಿಸ್ವಾರ್ಥ ಸೇವೆಯನ್ನು ಸಲ್ಲಿಸುವದು ಮುಖ್ಯವಾಗಿರುತ್ತದೆ. ಮತ್ತು ಸಮಾಜವನ್ನು ಒಂದು ಶಿಸ್ತು ಸಂಯಮ ಮತ್ತು ಸ್ವಚ್ಛತೆಯಲ್ಲಿ ತೊಡಗಿಸಲು ಸಾಧ್ಯವಾಗುತ್ತದೆ ಇದರ ಸದುಪಯೋಗವನ್ನು ಸ್ವಯಂಸೇವಕರಾದ ನೀವು ಹಲವಾರು ರೀತಿಯ ಸಮಾಜಮುಖಿ ಕಾರ್ಯಗಳನ್ನು ಸಮಾಜಕ್ಕೆ ಸಲ್ಲಿಸುವುದು ಮುಖ್ಯವಾಗಿರುತ್ತದೆ ಎಂದು ವಿದ್ಯಾರ್ಥಿಗಳಿಗೆ ಉದ್ಘಾಟಕರಾದ ಎಸ್ ಬಿ ಕುರಿ. ಸಲಹೆ ನೀಡಿದರು.
ಈ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯಕ್ರಮಾಧಿಕಾರಿಗಳಾದ ಬಸವರಾಜ ಎಸ್.ಎಂ. ಮಾತನಾಡಿ ದೇಶದ ಅಭಿವೃದ್ಧಿಯಲ್ಲಿ ಯುವಕರನ್ನು ತೊಡಗಿಸಲು 24 ಸಪ್ಟೆಂಬರ್ 1969 ಮಹಾತ್ಮ ಗಾಂಧೀಜಿಯವರ ಜನ್ಮ ಶತಾಬ್ದಿ ಸವಿನೆನಪಿಗಾಗಿ ಇದನ್ನು ಪರಿಚಯಿಸಲಾಯಿತು. ರಾಷ್ಟ್ರೀಯ ಸೇವಾ ಯೋಜನೆಯಿಂದ ಸ್ವಯಂಸೇವಕರಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡಲಾಗಿದೆ ರಾಷ್ಟ್ರೀಯ ಯೋಜನೆಯ ಮುಖ್ಯ ದೇಯೋದ್ದೇಶ ನನಗಲ್ಲ ನಿನಗೆ(Not me but you). ಎಂಬ ಉದ್ದೇಶದೊಂದಿಗೆ ಸ್ವಯಂಸೇವಕರು ಸ್ವಾರ್ಥವಿಲ್ಲದೆ ಸಮಾಜ ಸೇವೆಯಲ್ಲಿ ತೊಡಗುವುದಕ್ಕೆ ಪ್ರಮುಖವಾಗಿರುವುದು ರಾಷ್ಟ್ರೀಯ ಸೇವಾ ಯೋಜನೆ ಆದ್ದರಿಂದ ಇದು ಸಾಕಷ್ಟು ರೀತಿಯ ಯುವಕರ ಏಳಿಗೆಗಾಗಿ ಅಂದರೆ ಸಾಮಾಜಿಕ ಮೌಲ್ಯಗಳನ್ನು ,ನಾಯಕತ್ವ ಗುಣಗಳನ್ನು ಮತ್ತು ಹಲವಾರು ಕೌಶಲ್ಯತೆಗಳನ್ನು ಕೊಡುಗೆಯಾಗಿ ಸ್ವಯಂಸೇವಕರಿಗೆ ನೀಡುತ್ತದೆ. ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ರಕ್ತದಾನ ಶಿಬಿರ , ಆರೋಗ್ಯದ ಕಾಳಜಿ, ನೇತ್ರದಾನದ ಕುರಿತು ಜಾಗೃತಿ, ಆರೋಗ್ಯ ತಪಾಸಣೆ, ಸಸಿಗಳನ್ನು ನೆಡುವುದು, ಪರಿಸರ ಸಂರಕ್ಷಣೆ ಮತ್ತು ಹಲವಾರು ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಚಾರ್ಯರಾದ ಶ್ರೀಮತಿ ಉಷಾ ದೇವಿ ಹಿರೇಮಠ
ಮಾತನಾಡಿ ದೇಶ ಕಾಯುವಲ್ಲಿ ಸೈನಿಕರ ಎಷ್ಟು ಮುಖ್ಯವೋ ಸ್ವಯಂಸೇವಕರಾದ ನೀವು ಸಮಾಜ ಸೇವೆಯಲ್ಲಿ ತೊಡಗುವುದು ಅಷ್ಟೇ ಮುಖ್ಯವಾಗಿರುತ್ತದೆ. ರಾಷ್ಟ್ರೀಯ ಸೇವಾ ಯೋಜನೆ ಯು ಸ್ವಯಂಸೇವಕರಿಗೆ ವೇದಿಕೆಯನ್ನು ಕಲ್ಪಿಸುವಲ್ಲಿ ಸಹಕಾರಿಯಾಗುತ್ತದೆ ಮತ್ತು ವಿದ್ಯಾರ್ಥಿಗಳಿಗೆ ನಾಯಕತ್ವದ ಗುಣ ಗಳೊಂದಿಗೆ ಕೀಳರಿಮೆಯನ್ನು ಹೋಗಲಾಡಿಸುತ್ತದೆ ಮತ್ತು ಸಮಾಜದಲ್ಲಿ ಯಾವ ರೀತಿ ಬದುಕುವುದಕ್ಕೆ ಸಮಾಜದೊಂದಿಗೆ ಒಂದು ಶಿಸ್ತನ್ನು ಸ್ವಯಂಸೇವಕರಿಗೆ ಕಲಿಸುವುದು ರಾಷ್ಟ್ರೀಯ ಸೇವಾ ಯೋಜನೆ ಮುಖ್ಯ ಉದ್ದೇಶವಾಗಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಸೋಮಶೇಖರ್ ಯು ರಾಜು ಹಾಗೂ ದಹಿಕ ನಿರ್ದೇಶಕರಾದ ಬಸವರಾಜ ಅಳ್ಳಳ್ಳಿ ಹಾಗೂ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು. ಕಾರ್ಯಕ್ರಮವನ್ನು ಸಂಕಲ್ಪ ಅವರು ನೆರವೇರಿಸಿದರು, ವರುಣ್ ಕುಮಾರ್ ಸ್ವಾಗತಿಸಿದರು ಹಾಗೂ ಪ್ರಗತಿ ವಂದಿಸಿದರು ಹಾಗೂ ಕಿರಣ್ ಕುಮಾರ್ ಹಾಗೂ ಸಂಗಡಿಗರಿಂದ ರಾಷ್ಟ್ರೀಯ ಸೇವಾ ಯೋಜನೆಗೆ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.ಈ ಸಂದರ್ಭದಲ್ಲಿ ಕಾನೂನು ವಿದ್ಯಾಲಯದ ಸಿಬ್ಬಂದಿಗಳು ಸೇರಿದಂತೆ ಶಿಕ್ಷಕರು, ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿದ್ದು ವಿಶೇಷವಾಗಿತ್ತು.